Export ಮಾಡುವ ವಿಧಾನ: ಟರ್ಮಿನಲ್ app ತೆರೆದು SSH ಮುಖಾಂತರ server ಗೆ ಲಾಗಿನ್ ಆಗಿ, ಕೆಳಗಿನ ಕಮಾಂಡ್ type ಮಾಡಿ, mysqldump -p -u username database_name > databasename.sql (username ಅಂದ್ರೆ database username not server login name ) password enter ಮಾಡಿ, ಡೇಟಾಬೇಸ್ ಎಲ್ಲಾ content ಗಳು databasename.sql ಕಡತಕ್ಕೆ ಬ್ಯಾಕಪ್ ಆಗಿರುತ್ತದೆ. ಅದನ್ನು local ಕಂಪ್ಯೂಟರ್ ಗೆ ನಕಲು ಮಾಡಿಕೊಳ್ಳಿ. Import ಮಾಡುವ ಬಗೆ: SSH ಮುಖಾಂತರ ಡೇಟಾಬೇಸ್ ಆಮದು ಮಾಡಿಕೊಳ್ಳಬೆಕಾಗಿರುವ server ಗೆ ಲಾಗಿನ್ ಆಗಿ, ಮೊದಲು import ಮಾಡಿಕೊಲ್ಲಬೆಕಿರುವ ಕಡತವನ್ನು ಹೊಸ sarver ಗೆ ನಕಲು ಮಾಡಿಕೊಳ್ಳಿ. ಒಂದುವೇಳೆ ಹೊಸ server ನಲ್ಲಿ ಡೇಟಾಬೇಸ್ ಇಲ್ಲದಿದ್ದಲ್ಲಿ, ಹೊಸದೊಂದು ಡೇಟಾಬೇಸ್ ಅನ್ನು create ಮಾಡಿಕೊಳ್ಳಿ. ಈಗ ಕೆಳಗಿನ ಕಮಾಂಡ್ type ಮಾಡಿ mysql -p -u username new_database_name < database_name.sql Import ಆಗುವವರೆಗೆ ಕಾಯಿರಿ. ಹೊಸ ಡೇಟಾಬೇಸ್ ನಲ್ಲಿ ಹಳೆ ಡೇಟಾಬೇಸ್ ನ ಎಲ್ಲಾ ದತ್ತಾಂಶಗಳು ಆಮದಾಗಿರುತ್ತದೆ. #debian #mysql #backup #Import |